EnglishFrenchSpanish
ApkOnline Logo

ApkOnline favicon

Sanganna Karadi Koppal Download

Free download Sanganna Karadi Koppal APK

Sanganna Karadi Koppal

The official app & game

Distributed by ApkOnline

 

SCREENSHOTS

Ad


 

DESCRIPTION

Download this app named Sanganna Karadi Koppal.

ಕೊಪ್ಪಳ ತಾಲೂಕಿನ ರೈತಾಪಿ ಕುಟುಂಬದಲ್ಲಿ 1950, ಮೇ 8ರಂದು ಜನಿಸಿದ ಸಂಗಣ್ಣ ಕರಡಿ ಅವರು ತಮ್ಮ 28ನೇ ವಯಸ್ಸಿನಲ್ಲಿ ರಾಜಕೀಯ ರಂಗಕ್ಕೆ ಪಾದಾರ್ಪಣೆ ಮಾಡಿದರು. ಅವಿಭಜಿತ ರಾಯಚೂರು ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಕ್ಷೇತ್ರ ಪ್ರವೇಶಿಸಿದ ಸಂಗಣ್ಣ ಕರಡಿ, ಜನಪರ ಕೆಲಸಗಳನ್ನು ದೊಡ್ಡ ಪ್ರಮಾಣದಲ್ಲಿ ಮಾಡಲು ಈ ಕ್ಷೇತ್ರದಲ್ಲಿ ಅವಕಾಶಗಳಿವೆ ಎಂಬುದನ್ನು ಕಂಡುಕೊಂಡರು.

ಈ ಹಿನ್ನೆಲೆಯಲ್ಲಿ, 1994ರಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿದರು. ಅಲ್ಲಿಂದ ಶುರುವಾದ ಇವರ ಯಶೋಗಾಥೆ 1999, 2008ರ ವಿಧಾನಸಭಾ ಚುನಾವಣೆ ಹಾಗೂ 2011ರಲ್ಲಿ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಅತಿ ಹೆಚ್ಚು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ಹೊಂದಿತು. 2014ರಲ್ಲಿ ನಡೆದ
16ನೇ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗುವ ಮೂಲಕ, ಶಾಸಕ ಹಾಗೂ ಸಂಸದರಾಗಿ ಆಯ್ಕೆಯಾದ ಜಿಲ್ಲೆಯ ಏಕೈಕ ವ್ಯಕ್ತಿ ಎಂಬ ಹಿರಿಮೆ ಗಳಿಸಿದ್ದಾರೆ.

1994ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಸಂಗಣ್ಣ ಕರಡಿ ಅವರು ಜನಸಾಮಾನ್ಯರ ಜೊತೆ ಬೆರೆತು ಕೆಲಸ ಮಾಡಿದ ಮೊದಲ ರಾಜಕಾರಣಿ ಎಂಬ ಮನ್ನಣೆಗೆ ಪಾತ್ರರಾದರು. ರೈತರು, ಜನಸಾಮಾನ್ಯರಷ್ಟೇ ಅಲ್ಲ, ಸರ್ಕಾರಿ ಅಧಿಕಾರಿಗಳ ಜೊತೆಗೂ ನಯ-ವಿನಯದಿಂದ ವರ್ತಿಸುವ ಮೂಲಕ, ಪ್ರಗತಿಪರ ಕೆಲಸಗಳು ದೊಡ್ಡ ಪ್ರಮಾಣದಲ್ಲಿ ನಡೆಯಲು ಕಾರಣರಾದರು.

ಇವರ ಅವಧಿಯಲ್ಲಿ ಕೊಪ್ಪಳ ನೂತನ ಜಿಲ್ಲೆಯಾಯಿತು. ಹೊಸ ಜಿಲ್ಲೆ ಎದುರಿಸುತ್ತಿದ್ದ ಪ್ರಮುಖ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ, ನೂತನ ಜಿಲ್ಲೆಗಳ ಪೈಕಿ ಕೊಪ್ಪಳ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆ ಎಂದು ಗುರುತಿಸುವಂತಾಗಲು ಕಾರಣಕರ್ತರಾದರು.

ಕೃಷಿ, ನೀರಾವರಿ, ರಸ್ತೆ, ರೈಲ್ವೆ ಮಾರ್ಗ, ಕೈಗಾರಿಕೆ, ಶಿಕ್ಷಣ, ಉದ್ಯೋಗ, ವಿದ್ಯುತ್- ಹೀಗೆ ಪ್ರಗತಿ ತಂದುಕೊಡಬಲ್ಲ ಪ್ರತಿಯೊಂದು ಕ್ಷೇತ್ರವನ್ನೂ ಅಭಿವೃದ್ಧಿಪಡಿಸಿದ ಹಿರಿಮೆ ಸಂಗಣ್ಣ ಕರಡಿ ಅವರದು.

ಒಟ್ಟು ನಾಲ್ಕು ಸಲ ಶಾಸಕರಾಗಿ ಆಯ್ಕೆಯಾಗಿರುವ ಸಂಗಣ್ಣ ಕರಡಿ, 2012ನೇ ಸಾಲಿನ ಸಂಕ್ಷಿಪ್ತ ಅವಧಿ ಹೊರತುಪಡಿಸಿ, ಪ್ರತಿಯೊಂದು ಸಲವೂ ಪ್ರತಿಪಕ್ಷಗಳ ಸಾಲಿನಲ್ಲಿಯೇ ಕೆಲಸ ಮಾಡಿದ್ದಾರೆ. ಕೊಪ್ಪಳ ಕ್ಷೇತ್ರಕ್ಕೆ ಅನುದಾನ ದೊರಕಿಸುವಲ್ಲಿ ಸಾಕಷ್ಟು ತಾರತಮ್ಯ ನಡೆದರೂ, ಸತತ ಹೋರಾಟದ ಮೂಲಕ ಕ್ಷೇತ್ರಕ್ಕೆ ಸಲ್ಲಬೇಕಿದ್ದ ಯೋಜನೆಗಳನ್ನು ತರಲು ಶ್ರಮಿಸಿದ್ದಾರೆ. ಅವರ ಈ
ಜನಪರ ಹೋರಾಟದ ಮನೋಭಾವನೆಯಿಂದಾಗಿ, 2014ರ ಲೋಕಸಭಾ ಚುನಾವಣೆಯಲ್ಲಿ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಮೊದಲ ಯತ್ನದಲ್ಲಿಯೇ ಸಂಸದರಾಗಿ ಆಯ್ಕೆಯಾಗಿದ್ದಾರೆ.

Updates: 

 

Sanganna Karadi Koppal from ApkOnline.net

Ad


Ad